ನಾವು ಅಯ್ದನೇ ಬಾರಿಗೆ ಕನ್ನಡ ಅಂಕಿಗಳು ಮತ್ತು ಕನ್ನಡದ ಹಲವು ಹಿರಿಯರ ಬಗ್ಗೆ ತಿಳಿವುಗಳನ್ನೊಳಗೊಂಡ ಒಂದು ಗೋಡೆ ನಾಳುತೋರುಗೆಯನ್ನು ಅಚ್ಚಿಸಿದ್ದೇವೆ. ಇದಕ್ಕೆ ಆರ್ಟ್ ಪೇಪರ್ (೧೩೦ gsm) ಬಳಸಲಾಗಿದೆ ಇದು ದೊಡ್ಡದಾಗಿ (೧೬" x ೧೨") ಇದೆ. ಇದರ ಬೆಲೆ ರೂ. ೧೨೫/- (ಅಂಚೆ ವೆಚ್ಚ ರೂ ೫೦ / ಒಂದೊಂದು ೧೦ರ ಕಟ್ಟಿಗೆ ). ನೀವು ಒಂದು ಬಿಡಿಯನ್ನು ಬೇಕಿದ್ದರೂ ಕೊಳ್ಳಬಹುದು. ಈ ಒಂದು ಕನ್ನಡ ಸೊಗಡಿನ ನಾಳುತೋರುಗೆಯನ್ನು ನೀವು ಕೊಳ್ಳಲು ಬಯಸುವಿರಾದಲ್ಲಿ ಈ ಕೆಳಗಿನ ಕುರಿಪುಗಳನ್ನ ತುಂಬಿ ಹಣವನ್ನು ಕಟ್ಟಿರಿ. ಅಂಚೆಯ ಮೂಲಕ ನಿಮ್ಮ ಬಿಡಿಗಳನ್ನು ಕಳಿಸುತ್ತೇವೆ.
| ಏಡು | ೨೦೨೬ |
| ಬದಿಗಳು | ೧೨ |
| ಹಾಳೆಗಳು | ೧೩೦ ಜಿಎಸ್‌ಎಮ್ ಆರ್ಟ್ |
| ಮಾದರಿ | ಅಚ್ಚಗನ್ನಡ |
| ಒರಪು | ೪ ಒರಪುಗಳುಳ್ಳ |
Pisumathu Enterprises, a Rajajinagar-based web design company, is publishing its ‘Kannada Naalutoruge’ for the second year. Launched in 2021, the calendar is part of a linguistic movement seeking to restore Kannada words derived from Dravidian roots.
“There are no English or Sanskrit words in the calendar’s content. Kannada calendars tend to have a Sanskrit influence, but we have tried to eliminate that by using a more native Kannada. Even the numerals are in Kannada,” says Shreepathi Gogadige, proprietor.
The lack of a calendar in a Kannada drawing on its proto-Dravidian roots pushed Shreepathi to take up the calendar project. “I went looking across the city three years ago, but couldn’t find a single calendar in a Kannada free of English and Sanskrit overtones. I noticed some languages like Marathi and Rajasthani were sticking to their roots, and I thought why not in Kannada,” he says. The calendar has notes about Kannada literary giants such as Kuvempu, Shivarama Karanth and B M Srikantaiah. “This way, people get to remember them and their birth anniversaries,” he says. The calendar is priced at Rs 70. It is available on pisumathu.com
ಕನ್ನಡ ಎನ್ನುವ ಮೂರಕ್ಷರದ ಪದವೇ ಹಾಗೆ, ಎಲ್ಲರನ್ನೂ ತನ್ನತ್ತ ಬರಮಾಡಿಕೊಳ್ಳುತ್ತದೆ ಮತ್ತು ಎರಡೂ ಕೈಗಳಿಂದ ಬಿಗಿದಪ್ಪಿ ಮುನ್ನಡೆಸುತ್ತದೆ. ಇದಕ್ಕೇ ಏನೋ ಅನೇಕರು ತಮ್ಮೂರನ್ನು ಬಿಟ್ಟು ಕನ್ನಡದ ನೆಲ, ಜಲ, ಗಾಳಿಗೆ ಹೊಂದಿಕೊಂಡು ಇಲ್ಲಿಯೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಕನ್ನಡಿಗನ ಆಶಯ ಒಂದೇ. ಇಂಗ್ಲಿಷ್, ಹಿಂದಿ ಇನ್ನಿತರ ಭಾಷೆಗೆ ಸಿಗುವ ಪ್ರಾಮುಖ್ಯತೆ ಕನ್ನಡಕ್ಕೂ ಸಿಗಬೇಕು. ಕನ್ನಡ ಎಂಬುದು ಎಂದಿಗೂ ಆರದ ದೀಪವಾಗಿರಬೇಕು. ಇಂತಹದ್ದೇ ಆಶಯದೊಂದಿಗೆ ಜೀವನ ನಡೆಸುತ್ತಿರುವವರು ವೆಬ್ ಡೆವಲಪರ್ ಶ್ರೀಪತಿ ಗೋಗಡಿಗೆ (Shreepti gogadige). ಸದ್ಯ ಅವರು ಕನ್ನಡ (Kannada) ಕೇವಲ ಮಾತಿಗಷ್ಟೇ ಸೀಮಿತವಾಗಿದ್ದರೆ ಸಾಲದು ಅದು ಪ್ರಸ್ತುತಿಗೂ ಬರಬೇಕು ಎಂಬ ನಾಣ್ಣುಡಿಯೊಂದಿಗೆ ನೂತನ ನಿರ್ಧಾರಕ್ಕೆ ಸಾಕ್ಷಿಯಾಗಿದ್ದಾರೆ. ಕನ್ನಡ ಪತ್ರಿಕೆ ಪ್ರತಿನಿತ್ಯ ಬಂದರೆ ಸಾಲದು ಅದರ ಜತೆಗೆ ಮನೆಯಲ್ಲಿ ಸದಾ ಕಾಲ ಗೊಡೆಗೆ ನೇತುಬಿದ್ದಿರುವ ಕ್ಯಾಲೆಂಡರ್ನಲ್ಲೂ ಕನ್ನಡ ಬೇಕು ಎಂಬ ಮುನ್ನುಡಿ ಬರೆದಿದ್ದಾರೆ. ಕನ್ನಡ ನಾಳುತೋರುಗೆ ಎಂಬ ಅಚ್ಚ ಕನ್ನಡದ ಕ್ಯಾಲೆಂಡರ್ (kannada calendar) ಮಾರುಕಟ್ಟೆಗೆ ದಾಪುಗಾಲಿಟ್ಟಿದ್ದು, ಕನ್ನಡ ಪ್ರೇಮಿ ಶ್ರೀಪತಿ ಗೋಗಡಿಗೆ ಟಿವಿ9 ಡಿಜಿಟಲ್ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರದೇ ಮಾತುಗಳಲ್ಲಿ ಅವರ ಆಶಯ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.